
Loading...
ಎಲ್ಲರಿಗೂ ಖಗೋಳವಿಜ್ಞಾನ ದಿನದ ಶುಭಾಶಯಗಳು!
ಖಗೋಳ ವಿಜ್ಞಾನ ದಿನವು, ಜನರ ಖಗೋಳ ವಿಜ್ಞಾನದ ಅಂತರವನ್ನು ಹೋಗಲಾಡಿಸಲು ಹಾಗೂ ಖಗೋಳ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ, ಜನಸಾಮಾನ್ಯರಿಗೆ ಸಂವಹನ ನಡೆಸಲು ಇರುವಂತಹ ಉತ್ತಮ ಅವಕಾಶವಾಗಿದೆ. .
ಈ ಚಿತ್ರದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಗುರುತಿಸಿ:

ನಿಮ್ಮ ಊಹೆಗಳು ಸಂಪೂರ್ಣಗೊಂಡರೆ, ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಹಾಗಿದ್ದರೆ ಖಗೋಳದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣವೇ?..
ಖಗೋಳವಿಜ್ಞಾನ ದಿನ?
ವರ್ಷದಲ್ಲಿ ಎರಡು ಬಾರಿ ಖಗೋಳ ವಿಜ್ಞಾನ ದಿನವನ್ನು ಆಚರಿಸುತ್ತೇವೆ. ಏಪ್ರಿಲ್ - ಮೇ ತಿಂಗಳುಗಳ ಮಧ್ಯ ಹಾಗೂ ಸೆಪ್ಟೆಂಬರ್- ಅಕ್ಟೋಬರ್ ತಿಂಗಳುಗಳ ನಡುವೆ ಬರುವಂತಹ ಚಂದ್ರನ ಮೊದಲ ಪಾದದ (First Quarter Moon) ಹಂತಕ್ಕೆ ಸಮೀಪ ಇರುವ ಶನಿವಾರವನ್ನು ಖಗೋಳ ವಿಜ್ಞಾನ ದಿನ ಎನ್ನಲಾಗುತ್ತದೆ..
2022ರ ಖಗೋಳವಿಜ್ಞಾನ ದಿನ : ಮೇ 7 ಮತ್ತು ಅಕ್ಟೋಬರ್ 1
ಚಂದ್ರನ ಪಾದದ (Quarter Moon) ಎಂದರೇನು?
ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತಲೂ ಚಲಿಸುವಾಗ, ಅದು ಪ್ರತಿ ತಿಂಗಳು ಒಮ್ಮೆ ಭೂಮಿಯ ಮತ್ತು ಸೂರ್ಯನ ನಡುವೆ, ಹಾಗೂ ಭೂಮಿಯ ಹಿಂದೆ ತಿಂಗಳಿಗೊಮ್ಮೆ ಹಾದುಹೋಗುತ್ತದೆ. ಈ ದಿನಗಳನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಎಂದು ಕರೆಯುತ್ತೇವೆ. ಇದು ನಮಗೆ ತಿಳಿದಿರುವ ವಿಷಯ.
ಅಮಾವಾಸ್ಯೆ ಮತ್ತು ಹುಣ್ಣಿಮೆಯ ನಡುವೆ ಚಂದ್ರನು ನಿಖರವಾಗಿ ಅರ್ಧ ಬೆಳಗುವ ಹಂತವನ್ನು ಚಂದ್ರನ ಮೊದಲ ಪಾದ (First Quarter Moon)ಎಂದೂ ಮತ್ತು ಹುಣ್ಣಿಮೆ ಹಾಗೂ ಅಮಾವಾಸ್ಯೆಯ ನಡುವಿನ ಅರ್ಧ-ಬೆಳಗುವ ಚಂದ್ರನ ಹಂತವನ್ನು ಚಂದ್ರನ ಕೊನೆಯ ಪಾದ(Last Quarter Moon) ಎಂದು ಕರೆಯಲಾಗುತ್ತದೆ.
ಈ ಅರ್ಧಚಂದ್ರ (Quarter Moon) ನನ್ನು ದುರ್ಬೀನುಗಳ ಅಥವಾ ದೂರದರ್ಶಕದ ಮೂಲಕ ವೀಕ್ಷಿಸಿದರೆ ಚಂದ್ರನ ಈ ಹಂತವು ಖಗೋಳ ವೀಕ್ಷಕರಿಗೆ ಬಹಳ ಆಕರ್ಷಣೀಯವಾಗಿದೆ. ಈ ಹಂತದಲ್ಲಿ ಸೂರ್ಯನ ಬೆಳಕು, ಚಂದ್ರನ ಮೇಲ್ಮೈ ಮೇಲೆ ಕಡಿಮೆ ಕೋನದಲ್ಲಿ ಬೀಳುವುದರ, ಪರಿಣಾಮವಾಗಿ ಪರ್ವತಗಳು ಮತ್ತು ಕುಳಿಗಳು ಉದ್ದವಾದ ನೆರಳುಗಳನ್ನು ಬಿತ್ತರಿಸುವುದರಿಂದ ಇದನ್ನು ನಾವು ಸುಲಭವಾಗಿ ವೀಕ್ಷಿಸಬಹುದು.
ನಿಮಗಿದು ಗೊತ್ತೇ ?
ಶುಕ್ರ ಗ್ರಹವು ನಮ್ಮ ಚಂದ್ರನಂತೆ ಬೇರೆ ಬೇರೆ ಹಂತಗಳನ್ನು ಹೊಂದಿದೆ. ಹೌದು! ಶುಕ್ರನು ಸೂರ್ಯನ ಸುತ್ತಲು ಸಾಗುತ್ತಿದ್ದಂತೆ, ಅದರ ಕಕ್ಷೆಯು ಭೂಮಿ ಮತ್ತು ಸೂರ್ಯನ ನಡುವೆ ಬರುತ್ತದೆ. ಈ ಕಕ್ಷೆಯಲ್ಲಿ ಮತ್ತಷ್ಟು ಮುಂದಕ್ಕೆ ಚಲಿಸುತ್ತಿರುವಾಗ, ಭೂಮಿಯಿಂದ ನೋಡಿದಾಗ ಸೂರ್ಯನ ಹಿಂದೆ ಹಾದುಹೋಗುವಂತೆ ಅನಿಸುತ್ತದೆ. ಈ ಕಕ್ಷೀಯ ಚಲನೆಯಲ್ಲಿರುವಾಗ, ಗ್ರಹದ ಮೇಲ್ಮೈ , ವಿವಿಧ ಕೋನಗಳಲ್ಲಿ ಸೂರ್ಯನ ಬೆಳಕಿನಿಂದ ಪ್ರಕಾಶಿಸುತ್ತದೆ, ಇದು ಶುಕ್ರನ ವಿವಿಧ ‘ಹಂತಗಳಿಗೆ’ ಕಾರಣವಾಗಿದೆ.

ಹೀಗೊಂದು ಮಾತಿನಂತೆ, ಉಂಗುರಗಳ ರಾಜನೇ ಉಂಗುರವನ್ನು ಕಳೆದುಕೊಂಡನಂತೆ !!!...
ಭೂಮಿಯು ಪ್ರತಿ 15 ವರ್ಷಗಳಿಗೊಮ್ಮೆ ಶನಿಯ ಉಂಗುರಗಳ ಸಮತಲದ ಮೂಲಕ ಹಾದುಹೋಗುತ್ತದೆ. ಇದು ಸಂಭವಿಸಿದಾಗ, ದೂರದರ್ಶಕದ ಮೂಲಕ ನೋಡಿದಾಗ ಶನಿ ಗ್ರಹದ ಉಂಗುರವು ಗೋಚರಿಸುವುದಿಲ್ಲ !! ಇದು ಮುಂದಿನ 20 ಮಾರ್ಚ್ 2025 ರಂದು ನಡೆಯಲಿದೆ.

ಕಂಕಣ ರಾಜನು ತೇಲುತ್ತಾನೆ ಸಹ !!
ಶನಿಯು ಅನಿಲ ಗ್ರಹವಾಗಿದ್ದು , ಹೆಚ್ಚಾಗಿ ಹೈಡ್ರೋಜನ್, ಹೀಲಿಯಂ, ಆಮ್ಲಜನಕ ಮತ್ತು ದ್ರವ ಮತ್ತು ಅನಿಲ ರೂಪದಲ್ಲಿರುವ ಇತರ ಅಂಶಗಳನ್ನು ಒಳಗೊಂಡಿರುತ್ತದೆ, ಇದು ಪ್ರತಿ ಘನ ಸೆಂಟಿಮೀಟರ್ಗೆ 0.687 ಗ್ರಾಂ ಸಾಂದ್ರತೆಯನ್ನು ನೀಡುತ್ತದೆ. ಮತ್ತೊಂದೆಡೆ ನೀರು ಘನ ಸೆಂಟಿಮೀಟರ್ಗೆ 1 ಗ್ರಾಂ ಸಾಂದ್ರತೆಯನ್ನು ಹೊಂದಿರುತ್ತದೆ. ಇದರರ್ಥ, ನೀವು ಒಂದು ಬೃಹತ್ ಕೊಳದಲ್ಲಿ, ಶನಿಗ್ರಹವನ್ನು ಅದರೊಳಗೆ ಇಳಿಸಿದರೆ, ಅದು ತೇಲುತ್ತದೆ. ಅಂದರೆ ಕಂಕಣ ರಾಜನು ತೇಲುತ್ತಾನೆ.

ಶನಿಯು ಸಾಧಾರಣ ಕತ್ತಲಿನ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವ ದೂರದ ಗ್ರಹವಾಗಿದೆ . ಭೂಮಿಯಿಂದ ಗುರು ಗ್ರಹಕ್ಕಿರುವ ಅಂತರದಷ್ಟೇ ಅಂತರವು ಶನಿ ಹಾಗು ಗುರು ಗ್ರಹಗಳ ನಡುವೆ ಇದೆ. ಹಾಗೂ ಶನಿಯು ಭೂ-ಸೂರ್ಯನ ಕಕ್ಷೆಯ 9 ಪಟ್ಟು ವ್ಯಾಸದ ಕಕ್ಷೆಯನ್ನು ಹೊಂದಿದೆ
ದೈತ್ಯ ನಕ್ಷತ್ರ!
ವಿಜ್ಞಾನಕ್ಕೆ ತಿಳಿದಿರುವ ಅತೀ ದೊಡ್ಡ ನಕ್ಷತ್ರವೆಂದರೆ.. ಸ್ಟೀಫನ್ಸನ್ 2-18 ಇದರ ತ್ರಿಜ್ಯವು ಸೂರ್ಯನ ತ್ರಿಜ್ಯಕ್ಕಿಂತ 2150 ಪಟ್ಟು ದೊಡ್ಡದಿದೆ . ಸೂರ್ಯನ ತ್ರಿಜ್ಯವು 695700 ಕಿ.ಮೀ . ಆಗಿದ್ದು ಈ ನಕ್ಷತ್ರದ ತ್ರಿಜ್ಯವು 1495755000 ಕಿ.ಮೀ. ಆಗಿದೆ . ಆದ್ದರಿಂದ ನೀವು ಸೂರ್ಯನನ್ನು ಸ್ಟೀಫನ್ಸನ್ 2-18 ರೊಂದಿಗೆ ಬದಲಾಯಿಸಿದರೆ, ಬೃಹತ್ ನಕ್ಷತ್ರದ ಹೊರ ಪದರಗಳು ಶನಿಯ ಕಕ್ಷೆಯವರೆಗೆ ತಲುಪುತ್ತವೆ!.
ಅತೀ ದೂರದ ನಕ್ಷತ್ರ
ವಿಜ್ಞಾನಕ್ಕೆ ತಿಳಿದಿರುವ ಅತ್ಯಂತ ದೂರದ ನಕ್ಷತ್ರ ಎಂದರೆ MACS J 1149 Lensed Star 1, ಇದು ಇಕರಸ್ ಎಂದೂ ಕರೆಯಲ್ಪಡುತ್ತದೆ. ಇದು ನೀಲಿ ದೈತ್ಯ ನಕ್ಷತ್ರವಾಗಿದ್ದು, ನಮ್ಮಿಂದ ಸುಮಾರು 14 ಶತಕೋಟಿ ಬಿಲಿಯ ಜ್ಯೋತಿರ್ವರ್ಷ ದೂರದಲ್ಲಿದೆ. ವಿಜ್ಞಾನಿಗಳು ಗುರುತ್ವ ಮಸೂರ ವನ್ನು ಉಪಯೋಗಿಸಿ ಹಬಲ್ ಟೆಲಿಸ್ಕೋಪ್ ನ ಸಹಾಯದಿಂದ , ಈ ನಕ್ಷತ್ರವನ್ನು ಗುರುತಿಸಿದರು, ಅದರ ಬೆಳಕು ನಮ್ಮನ್ನು ತಲುಪಲು 9 ಶತಕೋಟಿ ವರ್ಷಗಳ ಕಾಲ ಪ್ರಯಾಣಿಸಿದೆ.
ಆದ್ದರಿಂದ ಚಿತ್ರಗಳಲ್ಲಿ ಸೆರೆಹಿಡಿದ ಬೆಳಕು, ನಮ್ಮ ಸೂರ್ಯ ಹುಟ್ಟುವ ಮೊದಲೇ ಈ ನಕ್ಷತ್ರದಿಂದ ಹೊರಟಾಗಿತ್ತು

ನಾವು ಇಕರಸ್ ಅನ್ನು ನೋಡಲಾಗದಿದ್ದರೂ, ಈ ತಿಂಗಳು ನಮಗೆ ಬರಿಗಣ್ಣಿಗೆ ಕಾಣುವ ಅತೀ ಸಮೀಪದ ನಕ್ಷತ್ರವನ್ನು ನೋಡಬಹುದು.
ಕಿನ್ನರ ಪಾದ: ಅತೀ ಹತ್ತಿರದಲ್ಲಿ ಗೋಚರಿಸುವ ನಕ್ಷತ್ರ.
ಅಲ್ಫಾ ಸೆಂಟೌರಿ ಎಂದೂ ಕರೆಯಲ್ಪಡುವ ಕಿನ್ನರ ಪಾದ ಕಿನ್ನರ ಪಾದ ನಕ್ಷತ್ರ, ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಸಂಜೆ ದಕ್ಷಿಣ ಆಕಾಶದಲ್ಲಿ ಗೋಚರಿಸುವ ಕಿನ್ನರ (ಸೆಂಟೌರಸ್) ನಕ್ಷತ್ರಪುಂಜದ ಪ್ರಕಾಶಮಾನವಾದ ನಕ್ಷತ್ರ.
ಸಂಜೆ 8 ಗಂಟೆ ಸುಮಾರಿಗೆ, ದಕ್ಷಿಣ-ಆಗ್ನೇಯದ ದಿಕ್ಕಿನ ಕಡೆಗೆ ನೋಡಿದರೆ (ದಕ್ಷಿಣ ಮತ್ತು ಆಗ್ನೇಯ ನಡುವೆ) ದಿಗಂತದಲ್ಲಿ ಕಾಣುವ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ಆಲ್ಫಾ ಸೆಂಟೌರಿ.
ಕಿನ್ನರ ಪಾದ ನಮ್ಮ ಸೂರ್ಯನಂತೆಯೇ ನಕ್ಷತ್ರ, ಸುಮಾರು 4.37 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.
ಇದರರ್ಥ ಈ ಖಗೋಳವಿಜ್ಞಾನ ದಿನದಂದು ನೀವು ಗಮನಿಸಿದಾಗ, ಈ ನಕ್ಷತ್ರದಿಂದ ಬರುವ ಬೆಳಕು 4 ವರ್ಷ, 4 ತಿಂಗಳು ಮತ್ತು 13 ದಿನಗಳ ಹಿಂದೆ ಈ ನಕ್ಷತ್ರವನ್ನು ತೊರೆದಿದೆ; ಅರ್ಥಾತ್ 2 ಜನವರಿ 2017. ಆ ದಿನ ನೀವು ಎಲ್ಲಿದ್ದಿರಿ ಎಂದು ನೆನಪು ಮಾಡಿಕೊಳ್ಳಬಹುದೇ ?.

ಸೂರ್ಯ ದೊಡ್ಡ ನಕ್ಷತ್ರವಲ್ಲ!
ರಾತ್ರಿ ಆಕಾಶದಲ್ಲಿ ನೀವು ನೋಡುವ ಎಲ್ಲಾ ನಕ್ಷತ್ರಗಳು ಸೂರ್ಯನಿಗಿಂತ ದೊಡ್ಡದಾಗಿದೆ ಮತ್ತು ಪ್ರಕಾಶಮಾನವಾಗಿವೆ. ಆಲ್ಫಾ ಸೆಂಟೌರಿ ಸಹ ಸೂರ್ಯನಿಗಿಂತ ಸ್ವಲ್ಪ ದೊಡ್ಡದಾಗಿದೆ.
ಇದರರ್ಥ, ಆಲ್ಫಾ ಸೆಂಟೌರಿ ಯನ್ನು ಹೊರತುಪಡಿಸಿ ಬೇರಾವ ನಕ್ಷತ್ರ ಮಂಡಲಗಳಿಂದಲೂ ಸೂರ್ಯ ಕಾಣುವುದಿಲ್ಲ. 4.37 ಜ್ಯೋತಿರ್ವರ್ಷದಲ್ಲಿರುವ ಈ ನಕ್ಷತ್ರ ಮಂಡಲದಿಂದ, ಸೂರ್ಯನು ಕುಂತಿ ನಕ್ಷತ್ರಪುಂಜದಲ್ಲಿ ಕಾಣಿಸಿಕೊಳ್ಳುತ್ತಾನೆ.

ಕುಂತಿ ನಕ್ಷತ್ರಪುಂಜವು ಇತರ ನಕ್ಷತ್ರಪುಂಜಗಳಿಂದ?
ಕುಂತಿ ನಕ್ಷತ್ರಪುಂಜವು ಇತರ ನಕ್ಷತ್ರಪುಂಜಗಳ ಅದೇ ರೀತಿಯಲ್ಲಿ ಕಾಣಿಸುತ್ತದೆಯೇ? ನೀವು ನಿಜವಾಗಿಯೂ ದೂರದ ನಕ್ಷತ್ರ ವ್ಯವಸ್ಥೆಗೆ ಪ್ರಯಾಣಿಸಿದರೆ ಏನಾಗಬಹುದು?
ಕುಂತಿ ನಕ್ಷತ್ರಪುಂಜ 3D ಬಾಹ್ಯಾಕಾಶದಲ್ಲಿ
ಇದನ್ನು ಪ್ರಯತ್ನಿಸಿ:
3D ಆಯಾಮದಲ್ಲಿ ಸಪ್ತರ್ಷಿ ಮಂಡಲ ಹೇಗೆ ಗೋಚರಿಸುತ್ತದೆ :
Click and dragSwipe the spaceto explore in 3D
ಕೆಲವು ಉತ್ತಮ ಖಗೋಳವಿಜ್ಞಾನ ಸಂಪನ್ಮೂಲಗಳು:
PAAC ವೆಬ್ಸೈಟ್ ಇಂದ:
ಖಗೋಳವಿಜ್ಞಾನ ಸಂಪನ್ಮೂಲಗಳು
ವೆಬ್ಸೈಟ್ಗಳು:
ಸಾಫ್ಟ್ವೇರ್ಗಳು:
ಅಪ್ಲಿಕೇಶನ್ಗಳು:
