The Night Sky and its Beauty

September 15, 2021

Throughout history, humans were fascinated by the events in the skies. Over centuries we have witnessed the movement of the sun, the moon – with phases – ever changing; the bright glittering Venus, Jupiter, the moments where the Sun was eclipsed by a disc. On a clear night sky, we’ve observed stars falling – the meteors and occasionally, long tailed – comets. With time, which brought optics, we’ve realized that the sky is more beautiful in the realm of optic observations, with the majestic rings of Saturn, the 4 moon of Jupiter and their dance, the phases of Venus… Not to forget the stains on the face of the sun when viewed through a telescope with a filter, which we now call sunspots. Sky is and always has been fascinating for all observers alike.

Sparkling Stars

Let’s talk about the stars alone, for a moment. On a New Moon night, with clear dark skies, thousands of stars glitter in the void of the dark sky. Some shining bright like fireflies and some ever so slightly visible. Over generations with observations and movements of these stars, we humans saw shapes in the sky by connecting these stars. We could see Orion the Hunter who was set out to hunt in the night sky followed by his dog, Canis Major. In another region there was a giant magnificent scorpion, ever ready to sting. Not limiting to living things, we also saw a jar of water, Aquarius and weighing scales, the Libra. With such imagination, the sky was a blank canvas filled with various shapes which we now call constellations.

Constellation of Scorpius r

The Moon

Moving on, we have the Moon – The king of the Night Sky. Fascinating everyone regardless of their age. Captivated by its beauty, kids, agree to eat as their mothers show them the beautiful glowing moon in the night sky and adults are just fascinated by the sight and get lost in thoughts, looking at its glory. Appearing in the evening skies as a half-lit first quarter moon, growing in size, rising from the west moving towards the east with each passing night, appearing complete until the bright glorious full moon, once every month. Thereafter appearing to shed itself and slowly disappearing in the evening skies. For amateur astronomers looking at the Moon through their telescope, the Moon is the king of craters! Result of countless impacts from meteors, these craters become easily visible when observed through binoculars but with a 4-inch telescopes (101.6mm), may it be a refractor or a reflector, these craters appear in great detail. Without a telescope, we see these craters as stains on the face of the bright white moon. Even without a telescope, the sight of the crescent moon is always fascinating to the human mind.

Craters on the First Quarter Moon.

Supermoon

Moving around the Earth in an elliptical orbit (elongated circular), the Moon moves closer and away from the earth. This average distance of 384400km orbital radius, reduces to 356000km as the Moon approaches its closest point to the Earth, we call Perigee; and increases to 406000km as the Moon moves away reaching its farthest point, wee call Apogee. You can notice the Moon at Perigee is 30000 km closer to the Earth, which when coincides with the Full Moon, is called the Super Moon.

Supermoon (Left) in comparison with a regular Full Moon.

The Supermoon appears 11% brighter and 25% larger than an average Full Moon. When at Apogee, a full moon is called a Micro Moon. With these distances, it is evident that the Moon is very small compared to the Earth, so much so that, if Earth was hollow, you could fill 50 moons inside it.

Eclipses

The Next topic we will talk about is Eclipses – The ones between Earth, Sun and the Moon and their mesmerizing shadow play. As the fifth century Indian Astronomer Aryabhata described them, Eclipses are simply alignments where the shadow of one falls on the other. When the shadow of one completely encompasses the other object, we have a total eclipse and when the shadow covers only apart of the other object, it is a partial eclipse. As the Moon moves between the Earth and the Sun, if the alignment leads to the shadow of the Moon falling onto the Earth, we have a solar eclipse and an eclipse around a full moon night, when the Earth is in between the Sun and the Moon, is a lunar eclipse. A solar eclipse occurs once every 6 months at some part of the Earth accompanied by a Lunar Eclipse, 15 days before or after (or both) during this time. While a Lunar Eclipse lasts for over an hour in duration, a Solar Eclipse lasts only a few minutes (about 7.5 minutes). The sight of the Lunar eclipse is completely safe for the Human eye and can be enjoyed by everyone without any optical aids. However, a solar eclipse is never a safe sight for the unaided eye. A solar eclipse must always be viewed through filters, filtered-optics or through projections using a Pin-Hole.

Although the Moon moves in between the Sun and the Earth on every New Moon day and moves behind the Earth on every Full Moon day, we do not have eclipses occurring every month as these days take place. The path of the Earth around the Sun and the path of the Moon around the Earth – their resulting planes are not aligned perfectly, but rather a small tilt of 5degrees exists between these planes. Therefore the Sun-Earth-Moon alignments are perfectly straight only at the points of Intersections of these planes, which we call Lunar Nodes. Indians have observed and studied eclipses from ancient times (circa. 4000 BCE) evident from the names Rahu and Ketu given to the Lunar Nodes.

Lunar Nodes

The Morning Star

Now let’s talk about Venus. Popularly known as the Evening Star and also the Morning star, due to its shiny appearance in the Eastern skies in the Morning and in some months, in the Western skies in the Evening, making everyone wonder if it is a bright star or a planet. Further addition to this enigmatic ‘star’ is its appearance that lasts for only two and a half hours at max (when it is at 47 degrees altitude) in the part of the sky that it can be seen. Unlike the other stars, Venus is never visible at the zenith or lasts for the entire duration of the night, due to its proximity to the Sun.

Although Venus appears Magnificent in the skies, its true beauty is evident only when viewed through a telescope. While the Earth is 150 million km away from the Sun, Venus lies in between this orbit at 110 million kms away from the Sun. Because the orbit of Venus lies inside the Earth’s orbit, as the two planets orbit with varying periods, Venus, when viewed from Earth’s perspective, moves closer to us and away from us, as it orbits the Sun. When in between the Earth and the Sun, at its closest – perigee, Venus is 40000000 kms away from us and when it moves behind the Sun, at its closest -apogee, the bright planet is 260000000 kms away from us. As this cycle repeats every 16 months, one can see Venus change in size, through a telescope.

As it approaches us, the sun lit part of Venus faces away from us, therefore one can see a large crescent Venus, as compared to when Venus is almost behind the Sun (appearing very close to the Sun in the sky), appearing near-completely illuminated and very small in size. When Venus appears farthest from the Sun in the sky, it appears the highest in the sky and the sight through the telescope is of a beautiful half-lit Venus like a quarter Moon. The size of the Venus is roughly equal to that of Earth but due to its dense atmosphere primarily made of Carbon Dioxide and its proximity to the Sun, Venus is the hottest planet in the solar system.

Phases of Venus.

The Smallest Planet

Moving further closer to the Sun from Venus, we have Mercury. Visible only during a few months in the year, and during this time, its visibility lasts only for about 45 minutes very close to the horizon. The reason for this short duration is the same as Venus, but Mercury is far closer to the Sun. Mercury lies about 60million km from the Sun and approaches Earth once every 116 days. With the Visibility windows opening up around 6 times each year, it alternates between the Eastern skies in the mornings and the western skies in the evenings. Mercury is appears faint due to its distance and also its size which is 18 times smaller compared to our Earth, being the smallest planet in the solar system.

The Red Planet

Then we have Mars – Glowing with a red tint in the night sky. Located at 230 million kms from the Sun, Mars approaches Earth once every 2 years (780 days), making the two planets at just 60 million kms apart. During this time, Mars appears in its biggest and brightest form for the entire duration of the night. We call this the Opposition of the planet. This is when the planet behind the Sun (like a full Moon) when viewed from Earth, and hence fully illuminated which makes it the best time to observe the heavenly body. Although 6 times smaller in size compared to the Earth, Mars is the home planet to the biggest volcano in the solar system – the Olympus Mons which is more than three times the height of Mt. Everest. Mars is also home to a trench, 4000km in length and attracts two natural satellites both of which are too small to be observed through a telescope.

Mars through a telescope. PC: AGAS360

The Gas Giant

Moving father outwards, we have the largest planet in the solar system, Jupiter. Jupiter is so large…. That if it was hollow, we could fill that space with 1400 Earths. Made completely out of dense gas, this giant is located about 740 million kms from the Sun. Like Mars, Jupiter approaches the Earth, or rather, Earth moves closer to Jupiter reducing 150 million kms between them. During this time, Jupiter is located behind the Earth, which leads to the Opposition of Jupiter, making it appear its brightest, largest and longest in the year. Jupiter is a treat to observe through both the naked eye and a telescope.

Appearing bright like a star, dominating the sky when visible, Jupiter appears with 4 moons when viewed through even low powered telescopes. It hosts 79 moons in total of which the 4 largest, that are visible, are called the Galilean moons. One can easily notice the orbital motion of these Galilean moons if observed at regular intervals, and with a powerful telescope like an 8-inch aperture, would also make visible the bands and the red spot on the gaseous surface of Jupiter.

Jupiter and its Moons through a telescope. PC: @atulbhats

The Ringed Planet

And then we have the last visible planet, Saturn. The most beautiful planet of the solar system, if you will…. Saturn is located about 14 billion kms from the Sun and is about the same distance from Jupiter as Jupiter is from Earth, making it twice as far as Jupiter for us, making it appear less brighter than Jupiter. Saturn is also a gas giant like Jupiter but with lesser density. Density of Saturn is lighter than water and therefore the 2nd largest planet of the solar system would float if you’d drop it in a large enough pool of water. But compared to the Earth, Saturn is 800 times larger in volume.

Like Jupiter, Saturn also has its opposition occurring once every year when Earth moves closer to Saturn, on its orbit. But the true beauty of Saturn is visible only through a telescope when one can catch the sight of the might rings that encircle the planet, causing a great deal of wonder among stargazers and astronomers alike. Saturn is also home to 82 moons of its own.

Saturn and its Majestic rings through a telescope. PC: AGAS360

The Wanderers

Apart from the 5 planets, visible in the night sky, an amateur astronomer can anticipate the sight of Comets and Meteors without optical aid. Although a long tailed bright comet is a rare sight (perhaps once or twice in a lifetime), the dust and debris left behind by them also give us great viewing pleasures through meteors. As the Earth passes through these debris, they are pulled into the atmosphere where they burn and light up the sky with streaks of various colours. Meteors on their own are unpredictable but are best seen during the times of a meteor shower and can be enjoyed as the streaks light up the sky in the form of cosmic fireworks.

Comets, however, are completely unpredictable as they get invited by the Sun from their home – the Oort’s cloud. As they approach the Sun, they may or may not be visible depending on their location, and other physical characteristics and also their capacity to withstand the journey. But all icy comets that approach the Sun, get their surface melted, leaving behind a tail that trails with the comet. These tails sometimes get really large, up to 100,000 km long.

Comet NEOWISE in 2020. PC: Vibhav Mangalore

Clear Skies!

The Cosmos is a place of awe and wonder to every amateur astronomer. The countless stars, constellations, star clusters, galaxies, beginning from the beautifully visible Milky way, to the darkest spots in the night sky… are a never-ending fascination to every one of us. Igniting thoughts that dwell from the creation of the stars, galaxies, our universe to our very existence… Astronomy brings us light; it brings us a sense of enlightenment.


The Kannada Version of this article was first published in the September 2021 issue of the magazine, Sutra (Read Online). Translated to English by Meghana J.V

ಆಕಾಶ ಅಗೆವ ಬುದ್ಧಿಗಿಲ್ಲುಂಟು ಅನಂತ ಅವಕಾಶ

ಆಕಾಶದ ಅದ್ಭುತಗಳನ್ನು ನೋಡಿ ಖುಷಿ ಪಡದವರಾರು? ಆಶ್ಚರ್ಯಪಡದವರಾರು? ಅಷ್ಟಿಷ್ಟಾದರೂ ಜನ್ಮ-ಜನ್ಮಾಂತರದ ಬಗ್ಗೆ ಯೋಚಿಸುತ್ತ ತುಸುವಾದರೂ ಯೋಗಿಗಳಾಗದವರು ಯಾರು! ಪ್ರಾಚೀನ ಕಾಲದಿಂದಲೂ ಮನುಷ್ಯನಿಗೆ ವಿಸ್ಮಯವಾಗಿ ಕಾಡುತ್ತ ಬಂದಿರುವ, ಅವನ ಬುದ್ಧಿಯನ್ನು ಪ್ರಚೋದಿಸಿರುವ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಹುಣ್ಣಿಮೆ ಚಂದ್ರ, ಹೊಳೆವ ಶುಕ್ರ, ಮಂಗಳ, ಗುರು, ಶನಿ ಗ್ರಹಗಳು, ಗ್ರಹಣಗಳು, ಉಲ್ಕಾಪಾತ, ಬಣ್ಣ ಬಣ್ಣದ ನಕ್ಷತ್ರಗಳು, ಉದ್ದುದ್ದ ಬಾಲದ ಧೂಮಕೇತುಗಳು… ಆಕಾಶದ ಅದ್ಭುತಗಳು ಒಂದೇ ಎರಡೇ! ಇವೆಲ್ಲ ಮನುಷ್ಯನ ಅರಿವಿನ ದಿಗಂತವನ್ನು ವಿಸ್ತರಿಸಿವೆ, ಅವನನ್ನು ನಿತ್ಯಕುತೂಹಲಿಯಾಗಿಟ್ಟಿವೆ, ಅವನ ನಾಗರಿಕತೆಯನ್ನು ಬರೆದಿವೆ. ಚಿಕ್ಕ ದೂರದರ್ಶಕದಲ್ಲಂತೂ ಬರಿಗಣ್ಣಿಗೆ ಕಾಣದ ಅನೇಕ ಸತ್ಯಗಳು ಅನಾವರಣಗೊಳ್ಳುತ್ತಿರುತ್ತವೆ. ಶನಿ ಗ್ರಹದ ಬಳೆಗಳು, ಗುರು ಗ್ರಹದ ನಾಲ್ಕು ಚಂದ್ರರು ಹಾಗೂ ಅವುಗಳ ಕುಣಿದಾಟ, ಚಂದ್ರನ ಪರ್ವತಗಳು ಹಾಗೂ ಕುಳಿಗಳು, ತದಿಗೆ ಚಂದ್ರನಂತೆ ಬೆಳ್ಳನೆ ಹೊಳೆವ ಶುಕ್ರ ಗ್ರಹ, ಆಕಾಶಗಂಗೆ – ಹೀಗೆ ಅನೇಕ. ಫಿಲ್ಟರ್ ಹಾಕಿದ ದೂರದರ್ಶಕದಿಂದ ಸೂರ್ಯ ಗ್ರಹಣ, ಸೂರ್ಯನ ಕಲೆಗಳು ಮುಂತಾದ ಹಲವು ಕೌತುಕಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಈ ಎಲ್ಲ ಖಗೋಳ ಸಂಭ್ರಮಗಳು ಕೊಡುವ ಆನಂದ, ಉಲ್ಲಾಸಗಳ ಮಜಲು ಬೇರೆಯೇ.

ತಾರೆಗಳ ವಿಷಯಕ್ಕೆ ಬರೋಣ. ಅಮಾವಾಸ್ಯೆಯ ರಾತ್ರಿಯಾಗಿರಬೇಕು. ಆ ಕಗ್ಗತ್ತಲಲ್ಲಿ ಬೇರೆ ಯಾವ ದೀಪಗಳ ಗೌಜೂ ಇಲ್ಲದಿದ್ದರೆ ಅದೆಂತಹ ಸೃಷ್ಟಿವೈಚಿತ್ರ್ಯದ ಅನಾವರಣ! ರಾಶಿ ರಾಶಿ ನಕ್ಷತ್ರಗಳು ಮಿಣುಕುತ್ತವೆ. ಕೆಲವು ಪ್ರಕಾಶಮಾನ. ಕೆಲವು ಹೊತ್ತಿದೆಯೋ ಇಲ್ಲವೋ ಎನ್ನುವಂತೆ ಮಂದ. ಇವುಗಳನ್ನು ಹಲವು ರಾತ್ರಿ ತದೇಕಚಿತ್ತದಿಂದ ಗಮನಿಸಿದ ಮನುಷ್ಯನಿಗೆ ಅಲ್ಲಿ ಹಲವು ಆಕೃತಿಗಳು ಕಂಡವು. ಓ ಅಲ್ಲಿ ಬೇಟೆಗೆ ಹೊರಟ ಮಹಾವ್ಯಾಧ, ಓ ಇಲ್ಲಿ ಕುಟುಕಲು ಸಿದ್ಧವಾಗಿ ಕೊಂಡಿ ಎತ್ತಿರುವ ವೃಶ್ಚಿಕ! ಮತ್ತಲ್ಲಿ ತಕ್ಕಡಿ, ಮತ್ತಿಲ್ಲಿ ನೀರಿನ ಕೊಡ! ಆಕಾಶವೆಷ್ಟು ವಿಶಾಲವೋ ಅಷ್ಟು ಹರವಿಕೊಂಡಿತು ಮಾನವನ ಕಲ್ಪನೆಯ ಕ್ಯಾನ್‍ವಾಸ್. ಹಲವು ನಕ್ಷತ್ರಗಳು ಜೊತೆ ಸೇರಿ, ಚಿತ್ರದ ಹಲವು ಬಿಂದುಗಳಂತೆ ಕಂಡಾಗ ಮನುಷ್ಯ ಅವೆಲ್ಲವನ್ನು ಒಟ್ಟಾಗಿ ನಕ್ಷತ್ರಪುಂಜಗಳು ಎಂದು ಕರೆದ.

ವೃಶ್ಚಿಕ ರಾಶಿ

ಚಂದ್ರ

ಆಗಸದ ಅಚ್ಚರಿಗಳನ್ನು ಈಗ ಒಂದೊಂದಾಗಿ ನೋಡೋಣ.ಚಂದ್ರ: ರಾತ್ರಿ ಆಕಾಶದಲ್ಲಿ ಚಂದ್ರ, ರಾಜ. ಪುಟಾಣಿ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ವೃದ್ಧರವರೆಗೆ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಚಂದ್ರ ಖುಷಿ ಕೊಡುವ ಕಾಯ. ಹುಣ್ಣಿಮೆ ಚಂದ್ರನ ಬೆಳುದಿಂಗಳು, ಅಬ್ಬಾ! ಹಾಲು ಹುಯ್ದಂತೆ. ಮನಸ್ಸಿಗೆ ಅದು ಕೊಡುವ ಹಿತಾನುಭವ ತಂಪು ತಂಪು. ಶುಕ್ಲ ಪಕ್ಷದಲ್ಲಿ ದಿನದಿಂದ ದಿನಕ್ಕೆ ಪಶ್ಚಿಮದಲ್ಲಿ ಮೇಲೇರುತ್ತಾ, ಪ್ರತಿ ದಿನವೂ ಹೊಸತನ. ಹುಣ್ಣಿಮೆಯ ನಂತರ ಪ್ರತಿ ದಿನ ಪೂರ್ವದಲ್ಲಿ ಕುಗ್ಗುತ್ತಾ ಅಮಾವಾಸ್ಯೆ ಸಮೀಪಿಸುತ್ತಿದ್ದಂತೆ ಬೆಳಗಿನ ಜಾವ ಉದಯಿಸುತ್ತದೆ. ತಿಂಗಳು ಪೂರ್ತಿ ಚಂದ್ರ ಚೆಂದ

ಚಂದ್ರನ ಮೇಲೆ ಬಿದ್ದ ಉಲ್ಕೆಗಳು ಮಾಡಿದ ಹೊಂಡಗಳು.

ಹವ್ಯಾಸಿಗಳ ದೂರದರ್ಶಕದಲ್ಲಿ ಚಂದ್ರ ಗುಳಿಗಳ (ಅಥವಾ “ಕುಳಿಗಳ”) ರಾಜ. ಚಂದ್ರನ ಮೇಲೆ ಬಿದ್ದ ಉಲ್ಕೆಗಳು ಮಾಡಿದ ಹೊಂಡಗಳು ಈ ಗುಳಿಗಳು. ಮಾಮೂಲಿ 4 ಇಂಚಿನ (10.16 ಸೆ.ಮೀ.) ಪ್ರತಿಫಲನ ದೂರದರ್ಶಕದಲ್ಲಿ ಅಥವಾ ವಕ್ರೀಭವನ ದೂರದರ್ಶಕದಲ್ಲಿ ಈ ಗುಳಿಗಳು ಬಹಳ ಚೆನ್ನಾಗಿ ಕಾಣುತ್ತವೆ. ಬರಿಗಣ್ಣಿಗೆ ಇವು ಚಂದ್ರನ ಮೇಲಿನ ಕಪ್ಪು ಕಲೆಯಾಗಿ ಕಂಡರೆ ದೂರದರ್ಶಕದಲ್ಲಿ ಇವುಗಳ ವಿಸ್ತಾರ ಬಹಳ ಚೆನ್ನಾಗಿ ಕಾಣುತ್ತದೆ.

ಸಾಮಾನ್ಯ ಹುಣ್ಣಿಮೆಗೆ ಹೋಲಿಸಿದರೆ ಸೂಪರ್ ಮೂನ್ (ಎಡ).

ಅದಲ್ಲದೆ ಪಂಚಮಿ, ಷಷ್ಠಿ ಹಾಗೂ ಸಪ್ತಮಿ ದಿನಗಳಲ್ಲಿ ಚಂದ್ರನ ಪರ್ವತಗಳು ದೂರದರ್ಶಕದಲ್ಲಿ ಬಹಳ ಸುಂದರವಾಗಿ ಕಾಣುತ್ತವೆ. ಬರಿಗಣ್ಣಿನ ನೋಟವಿರಲಿ, ದೂರದರ್ಶಕದ ಮೂಲಕ ಮಾಡುವ ವೀಕ್ಷಣೆ ಇರಲಿ, ಚಂದ್ರ ಕೊಡುವ ಖುಷಿ ಬೇರೆ ಯಾವ ಆಕಾಶಕಾಯವೂ ಕೊಡಲಾರದು ಎಂಬುದು ಬಹಳಷ್ಟು ಆಕಾಶವೀಕ್ಷಕರ ಅಭಿಮತ

ದೀರ್ಘವೃತ್ತಾಕಾರದಲ್ಲಿ ಭೂಮಿಗೆ ಪ್ರದಕ್ಷಿಣೆ ಹಾಕುವಾಗ ಚಂದ್ರನ ಸರಾಸರಿ ದೂರ 3,84,400 ಕಿಮೀ. ಆದರೆ ದೀರ್ಘವೃತ್ತದಲ್ಲಿ ಹತ್ತಿರದ ದೂರ (ಅರ್ಥಾತ್,”ಪುರಭೂಮಿ” (Perigee) ಸುಮಾರು 3,56,000 ಕಿಮೀ ಆದರೆ ದೂರದ ದೂರವಾದ ಅಪಭೂಮಿಯಲ್ಲಿ (Apogee) ಸುಮಾರು 4,06,000 ಕಿಮೀ. ಅದೇ ಪುರಭೂಮಿಗೆ ಬಂದಾಗ, ಹುಣ್ಣಿಮೆಯಾದರೆ, ಚಂದ್ರ ಸುಮಾರು 30,000 ಕಿಮೀ ಭೂಮಿಗೆ ಹತ್ತಿರ ಬಂದು, ದೊಡ್ಡದಾಗಿ ಕಾಣುತ್ತದೆ. ಇದಕ್ಕೆ “ಸೂಪರ್ ಮೂನ್” ಎನ್ನುವರು.

ಆಗ ಬೆಳುದಿಂಗಳ ಬೆಳಕೂ ಹೆಚ್ಚು,ಗಾತ್ರವೂ ಸುಮಾರು 25% ದೊಡ್ಡದು. ಆ ಹುಣ್ಣಿಮೆ, ಕವಿಗಳ ಪಾಲಿಗೆ “ಹುಣ್ಣಿಗೆ ಹೋಳಿಗೆ ಊಟ”. ದೂರದ ಅಪಭೂಮಿಗೆ ಬಂದಾಗ ಹುಣ್ಣಿಮೆಯಾದರೆ ಚಿಕ್ಕದಾಗಿ ಕಾಣುತ್ತದೆ. ಇದನ್ನು”ಮೈಕ್ರೋ ಮೂನ್” ಎನ್ನುತ್ತಾರೆ. ವಾಸ್ತವದಲ್ಲಿ ಚಂದ್ರ ಭೂಮಿಗಿಂತ ತುಂಬ ಚಿಕ್ಕದು. ಭೂಮಿಯ ಹೊಟ್ಟೆ ಪೊಳ್ಳಾಗಿದ್ದರೆ ಅದರೊಳಗೆ ಸುಮಾರು 50 ಚಂದ್ರರನ್ನು ತುಂಬಬಹುದು. ಆದರೂ ಚಂದ್ರ ಮನುಕುಲದ ಸಂತೋಷಕ್ಕಾಗಿಯೆ ಇರುವುದೋ ಎನ್ನುವಂತಿದೆ.

ಗ್ರಹಣಗಳು

ಸೂರ್ಯ, ಚಂದ್ರ ಹಾಗೂ ಭೂಮಿ – ಇವುಗಳ ನೆರಳು ಬೆಳಕಿನ ಆಟ. ಪ್ರಕೃತಿಯ ಈ ಸುಂದರ ಆಟ ಬಲು ಚೆಂದ. ಐದನೆಯ ಶತಮಾನದ ಭಾರತೀಯ ಖಗೋಳಶಾಸ್ತ್ರಜ್ಞ ಆರ್ಯಭಟ ಈ ಗ್ರಹಣಗಳನ್ನು ವಿವರಿಸುತ್ತಾ ಇವು ಕೇವಲ ಒಂದರ ನೆರಳು ಇನ್ನೊಂದರ ಮೇಲೆ ಬೀಳುವ ಪ್ರಕ್ರಿಯೆ ಎಂದಿದ್ದಾನೆ. ಒಂದರ ಮೇಲೊಂದು ಸಂಪೂರ್ಣ ನೆರಳು ಆವರಿಸಿದರೆ ಖಗ್ರಾಸ ಗ್ರಹಣ. ಆಂಶಿಕವಾಗಿ ಆವರಿಸಿದರೆ ಪಾಶ್ರ್ವಗ್ರಹಣ. ಪ್ರತಿ ಆರು ತಿಂಗಳಿಗೊಮ್ಮೆ ಭೂಮಿಯ ಯಾವುದಾದರೊಂದು ಪ್ರದೇಶದಲ್ಲಿ ಗ್ರಹಣವಾಗುತ್ತದೆ. ಹುಣ್ಣಿಮೆಯ ದಿನ ಇರುಳಲ್ಲಿ ಹೆಚ್ಚೆಂದರೆ ಒಂದೂವರೆ ಗಂಟೆ ಚಂದ್ರಗ್ರಹಣವಾದರೆ, ಅಮಾವಾಸ್ಯೆಯಂದು ಹಗಲು ಹೆಚ್ಚೆಂದರೆ ಏಳೂವರೆ ನಿಮಿಷ ಸೂರ್ಯಗ್ರಹಣ ಸಂಭವಿಸತ್ತದೆ.ಸೂರ್ಯಗ್ರಹಣವನ್ನುಬರಿಗಣ್ಣಿಂದ ನೋಡಬಾರದು. ಫಿಲ್ಟರ್ ಹಾಕಿದ ದೂರದರ್ಶಕದಿಂದ ನೋಡಬಹುದು. ಸೂರ್ಯನಿಗೆ ಪರಿಭ್ರಮಿಸುವ ಭೂಮಿಯ ಸಮತಲ ಹಾಗೂ ಭೂಮಿಯನ್ನು ಪ್ರದಕ್ಷಿಣೆ ಸುತ್ತುವ ಚಂದ್ರನ ಸಮತಲ – ಇವೆರಡೂ ಪರಸ್ಪರ ಐದು ಡಿಗ್ರಿ ಓರೆಯಾಗಿರುವುದರಿಂದ ಪ್ರತಿ ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಗ್ರಹಣಗಳಾಗುವುದಿಲ್ಲ. ಭಾರತೀಯರು ವೇದಕಾಲದಲ್ಲೇ (ಸುಮಾರು 6000 ವರ್ಷಗಳ ಹಿಂದೆ) ಗ್ರಹಣಗಳನ್ನು ಹಾಗೂ ಅವುಗಳ ಆವರ್ತನಗಳನ್ನು ಗಮನಿಸಿದ್ದರು.

ರಾಹು ಮತ್ತು ಕೇತು ಬಿಂದುಗಳು

ಶುಕ್ರ

ಶುಕ್ರನನ್ನು “ಬೆಳ್ಳಿ ಚುಕ್ಕಿ” ಎನ್ನುವರು ಸೂರ್ಯಾಸ್ತವಾದೊಡನೆ ಕೆಲವೊಮ್ಮೆ ಪಶ್ಚಿಮ ಆಕಾಶದಲ್ಲಿ ಫಳ ಫಳ ಹೊಳೆಯುವ, ಎಲ್ಲರನ್ನೂ ಆಕರ್ಷಿಸುವ, ಗ್ರಹವೋ ನಕ್ಷತ್ರವೋ ಹೇಳಲಾಗದ ಅತಿ ಸುಂದರ ಗ್ರಹ ಶುಕ್ರ. ಮತ್ತೆ ಕೆಲ ಕಾಲ ಬೆಳಗಿನ ಜಾವ ಪೂರ್ವ ದಿಗಂತದ ಶುಭ್ರ ನೀಲ ಆಕಾಶದಲ್ಲಿ ಮಿನುಗುತ್ತಿರುತ್ತದೆ. ಈ ಎರಡೂ ಸಮಯ ಹೆಚ್ಚೆಂದರೆ ಎರಡೂವರೆ ಗಂಟೆ ಮಾತ್ರ ಕಾಣುವುದು. ಇಡೀ ರಾತ್ರಿ ಎಂದೂ ಕಾಣುವುದಿಲ್ಲ. ಈ ಗ್ರಹ ನೆತ್ತಿಯ ಮೇಲೆ ಎಂದೂ ಕಾಣುವುದಿಲ್ಲ. ಪಶ್ಚಿಮದಲ್ಲೋ ಪೂರ್ವದಲ್ಲೋ ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಕಾಣುವುದು. ಇದಕ್ಕೆ ಕಾರಣ ಶುಕ್ರ ಸೂರ್ಯನಿಗೆ ಭೂಮಿಗಿಂತ ಹತ್ತಿರವಿರುವುದು. ಬರಿ ಕಣ್ಣಿಗೆ ಅತಿ ಸುಂದರವಾಗಿ ಹೊಳೆವ ಈ ಆಕಾಶಕಾಯ ನಕ್ಷತ್ರವಲ್ಲವೆಂದು ಗೊತ್ತಾಗುವುದು ದೂರದರ್ಶಕದಲ್ಲೇ. ದೂರದರ್ಶಕದಲ್ಲಿ ಶುಕ್ರಗ್ರಹ 47 ಡಿಗ್ರಿ ಎತ್ತರಕ್ಕೆ ಬಂದಾಗ ಚೌತಿ ಚಂದ್ರನಂತೆ ಅರೆ ನೆರಳಿನಿಂದ ಕಾಣುತ್ತದೆ.

ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿಮೀ ದೂರದಲ್ಲಿದೆ. ಈ ದೂರವನ್ನು ಒಂದು ಖಗೋಳಮಾನವೆನ್ನುವರು. ಸೂರ್ಯನಿಂದ ಸುಮಾರು 11 ಕೋಟಿ ಕಿಮೀ ದೂರದಲ್ಲಿರುವ ಶುಕ್ರ ಭೂಮಿಯಿಂದ ಒಂದೇ ದೂರದಲ್ಲಿರುವುದಿಲ್ಲ.16 ತಿಂಗಳಲ್ಲಿ ಒಮ್ಮೆ ಅತಿ ಸಮೀಪ (4 ಕೋಟಿ ಕಿಮೀ) ಬಂದರೆ, ಮತ್ತೊಮ್ಮೆ ಅತಿ ದೂರ (26 ಕೋಟಿ ಕಿಮೀ)ದಲ್ಲಿ ಇರುತ್ತದೆ. ಹತ್ತಿರ ಬರುವಾಗ ದೂರದರ್ಶಕದಲ್ಲಿ, ಅಮಾವಾಸ್ಯೆಗೆ ಸಮೀಪಿಸುವ ಚಂದ್ರನಂತೆ ಕ್ಷೀಣಿಸುತ್ತಾ ಬಲು ಸುಂದರವಾಗಿ ಕಾಣುತ್ತದೆ. ಶುಕ್ರ ಹೆಚ್ಚುಕಡಿಮೆ ಭೂಮಿಯಷ್ಟೇ ಗಾತ್ರ. ಆದರೆ ಮೇಲ್ಮೈಯಲ್ಲಿರುವ ದಟ್ಟ ಕಾರ್ಬನ್ ಡೈ ಆಕ್ಸೈಡ್‍ನಿಂದಾಗಿ ಅತಿ ಹೆಚ್ಚು ಉಷ್ಣತೆ ಇರುವ ಗ್ರಹ.

ಶುಕ್ರ ಗ್ರಹದ ಹಂತಗಳು

ಬುಧ

ಕೆಲವೊಮ್ಮೆ ಸಂಜೆ ಬಾನಂಗಳದಲ್ಲಿ ಸೂರ್ಯಾಸ್ತದ ಕೆಂಪು ರಂಗಿನ ಓಕುಳಿಯಾಟವನ್ನು ಕಣ್ತುಂಬಿಕೊಂಡು ಹಿಂದಿರುಗಿ ಹೊರಡಲನುವಾಗುವಷ್ಟರಲ್ಲಿ “ಹಲೋ! ನಾನಿದ್ದೇನಿಲ್ಲಿ” ಎಂದು ಕರೆವ ಗ್ರಹ ಬುಧ. ಸಂಜೆ ಆಕಾಶದಲ್ಲಿ ದಿಗಂತಕ್ಕೆ ಹತ್ತಿರ ಪಶ್ಚಿಮ ಆಕಾಶದಲ್ಲಿ ಅಥವಾ ನಸುಕಿನಲ್ಲಿ ಸೂರ್ಯೋದಯಕ್ಕೆ ಮೊದಲುಪೂರ್ವ ಆಕಾಶದಲ್ಲಿ ದಿಗಂತಕ್ಕೆ ಸಮೀಪ ಕೇವಲ 45 ನಿಮಿಷ ಕಾಣುವ ಗ್ರಹ ಬುಧ. ಈ ಗ್ರಹ ಈ ರೀತಿ ಕಣ್ಣುಮುಚ್ಚಾಲೆ ಆಡಲು ಅದು ಸೂರ್ಯನ ಸಮೀಪವಿರುವುದೇ ಕಾರಣ. ಬುಧ ಸೂರ್ಯನಿಂದ ಸುಮಾರು 6 ಕೋಟಿ ಕಿಮೀ ದೂರ. ಸುಮಾರು 116 ದಿನಗಳಲ್ಲಿ ಒಮ್ಮೆ ಭೂಮಿಗೆ ಸಮೀಪವಿದ್ದು (ಸುಮಾರು 9 ಕೋಟಿ ಕಿಮೀ) ಮತ್ತೊಮ್ಮೆ ಅತಿ ದೂರದಲ್ಲಿರುತ್ತದೆ (ಸುಮಾರು 21 ಕೋಟಿ ಕಿಮೀ) ಒಂದು ವರ್ಷದಲ್ಲಿ ಸುಮಾರು ಆರು ಬಾರಿ ಕಾಣುವ ಬುಧ, ಮೂರು ಸಲ ಪೂರ್ವ ಆಕಾಶದಲ್ಲಿ ಹಾಗೂ ಮೂರು ಸಲ ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೂಡನೆ ಕಾಣುತ್ತದೆ. ದೂರದರ್ಶಕದಲ್ಲಿ ಚಿಕ್ಕ ಚೌತಿ ಚಂದ್ರನಂತೆ ಕಾಣುತ್ತದೆ. ಸೌರವ್ಯೂಹದಲ್ಲಿ ಬುಧ ಚಿಕ್ಕ ಗ್ರಹ. ಭೂಮಿಯ ಗಾತ್ರಕ್ಕೆ ಹೋಲಿಸಿದರೆ ಬುಧ ಅಂದಾಜು 18 ಪಟ್ಟು ಚಿಕ್ಕದು.

ಮಂಗಳ

ರಾತ್ರಿಯಾಗಸದಲ್ಲಿ ಕೆಂಪು ಹವಳದಂತೆ ಹೊಳೆವ ಗ್ರಹ ಕುಜ (ಮಂಗಳ). ಸೂರ್ಯನಿಂದ ಸುಮಾರು 23 ಕೋಟಿ ಕಿಮೀ ದೂರ. ಭೂಮಿಗೆ ಎರಡು ವರ್ಷಕ್ಕೊಮ್ಮೆ (780 ದಿನಗಳು) ಸಮೀಪ ಬರಲಿದೆ. ಆಗ ಭೂಮಿ – ಮಂಗಳದ ಅಂತರ 6 ಕೋಟಿ ಕಿ.ಮೀ. ಭೂಮಿಯ ಸಮೀಪತಮ ಬಿಂದುವಿಗೆ ಬಂದಾಗ ದೊಡ್ಡದಾಗಿದ್ದು ಇಡೀ ರಾತ್ರಿ ಕಾಣುತ್ತದೆ. ಇದನ್ನು ಒಪೊಸಿಷನ್ (ಅಥವಾ “ವಿಯುತಿ”) ಎನ್ನುತ್ತಾರೆ. ಆಗ ದೂರದರ್ಶಕದಲ್ಲಿ ಮಾಮೂಲಿಗಿಂತ ಸ್ಪಷ್ಟವಾಗಿ ಕಾಣುತ್ತದೆ. 2022ರ ಡಿಸೆಂಬರ್ 8ರಂದು ಮುಂದಿನ ವಿಯುತಿ. ಮಂಗಳ ಗ್ರಹವು ಭೂಮಿಗಿಂತ ಗಾತ್ರದಲ್ಲಿ ಸುಮಾರು ಆರುಪಟ್ಟು ಚಿಕ್ಕದು. ಆದರೂ ಮಂಗಳನಲ್ಲಿ ಭೂಮಿಯ ಎವರೆಸ್ಟ್ ಪರ್ವತಕ್ಕಿಂತ ಮೂರು ಪಟ್ಟು ಎತ್ತರದ ಪರ್ವತವಿದೆ (ಒಲಿಂಪಸ್ ಮೋನ್ಸ್ಎತ್ತರವೇ 27 ಕಿಮೀ!). ಹಾಗೆ ಭೂಮಿಯಲ್ಲಿರದ 4 ಸಾವಿರ ಕಿಮೀ ಉದ್ದದ ಕಣಿವೆ ಮಂಗಳನಲ್ಲಿದೆ. ಮಂಗಳನಿಗೆ ಎರಡು ನೈಸರ್ಗಿಕ ಉಪಗ್ರಹಗಳಿವೆ.

ದೂರದರ್ಶಕದ ಮೂಲಕ ಮಂಗಳ ಗ್ರಹ. PC: AGAS360

ಗುರು

ಬಿಳಿ ಹಳದಿ ಬಣ್ಣದ ಗುರು ಗ್ರಹ ಸೌರವ್ಯೂಹದ ಗ್ರಹಗಳಲ್ಲಿ ದೊಡ್ಡದು. ಗುರುವಿನ ಗಾತ್ರ ಅದೆಷ್ಟು ಹೆಚ್ಚೆಂದರೆ ಅದರ ಹೊಟ್ಟೆ ಖಾಲಿಯಾಗಿದ್ದರೆ ಸುಮಾರು 1400 ಭೂಮಿಗಳನ್ನು ತುಂಬಬಹುದು! ಸೂರ್ಯನಿಂದ ಸುಮಾರು 74 ಕೋಟಿ ಕಿಮೀ ದೂರದಲ್ಲಿರುವ ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸುಮಾರು 15 ಕೋಟಿ ಕಿಮೀ ನಷ್ಟು ಮಾಮೂಲಿ ದೂರಕ್ಕಿಂತ ಸಮೀಪ ಬರುತ್ತದೆ. ಇದನ್ನು “ಜುಪಿಟರ್ಸ್ ಒಪೆಸಿಷನ್” (ಗುರುವಿಯುತಿ) ಎನ್ನುತ್ತೇವೆ. ಆ ಸಮಯದಲ್ಲಿ ಇಡೀ ರಾತ್ರಿ ಈ ಗ್ರಹ ಕಾಣುತ್ತದೆ. ಆಗ ಬರಿ ಕಣ್ಣಿಗೂ ಚೆಂದ; ಹಾಗೆ ದೂರದರ್ಶಕದಲ್ಲೂ ಬಲು ಚೆಂದ. ಗುರು ಗ್ರಹದ 79 ಚಂದ್ರರನ್ನು ಗುರುತಿಸಿದ್ದಾರೆ. ಗೆಲಿಲಿಯೋ 1610ರಲ್ಲಿ ತನ್ನ ದೂರದರ್ಶಕದಿಂದ ಗುರುವಿನ ನಾಲ್ಕು ಚಂದ್ರರನ್ನು ಪ್ರಥಮವಾಗಿ ನೋಡಿದ. ನಾವು ದೂರದರ್ಶಕದಿಂದ ಬೇರೆ ಬೇರೆ ದಿನಗಳಲ್ಲಿ ಗುರುವಿನ ನಾಲ್ಕು ಚಂದ್ರರನ್ನು, ಹಾಗೂ ಅವುಗಳ ತಿರುಗಾಟವನ್ನು ನೋಡಬಹುದು. ವಿಯುತಿಯ ಸಮಯದಲ್ಲಿ ಗುರುವಿನ ಹೊಟ್ಟೆಯ ಮೇಲಿನ ದೂಳಿನ ಪಟ್ಟಿಗಳು ಸ್ಪಷ್ಟವಾಗಿ ಕಾಣುತ್ತವೆ

ಟೆಲಿಸ್ಕೋಪ್ ಮೂಲಕ ಗುರು ಗ್ರಹ ಮತ್ತು ಅದರ ಚಂದ್ರರು. PC: @atulbhats

ಶನಿ

ಸೌರವ್ಯೂಹದಲ್ಲೇ ಅತಿ ಸುಂದರ ಗ್ರಹ. ಸೂರ್ಯನಿಂದ ಸುಮಾರು 140 ಕೋಟಿ ಕಿಮೀ ದೂರದಲ್ಲಿರುವ ಈ ಗ್ರಹ ಪ್ರಕಾಶದಲ್ಲಿ ಗುರುವಿಗಿಂತ ಕ್ಷೀಣ. ಗಾತ್ರದಲ್ಲೂ ಗುರುವಿಗಿಂತ ಚಿಕ್ಕದು. ಆದರೆ ಭೂಮಿಗಿಂತ ಅದೆಷ್ಟು ದೊಡ್ಡದೆಂದರೆ ಶನಿ ಗ್ರಹದ ಹೊಟ್ಟೆಯೊಳಗೆ ಸುಮಾರು 800 ಭೂಮಿಗಳನ್ನು ತುಂಬಬಹುದು. ವರ್ಷದಲ್ಲಿ ಒಮ್ಮೆ ಭೂಮಿಗೆ ಸ್ವಲ್ಪ ಸಮೀಪ ಬಂದು (ಶನಿವಿಯುತಿ) ಸ್ಪಷ್ಟವಾಗಿ ಕಾಣುತ್ತದೆ. ದೂರದರ್ಶಕದಲ್ಲಿ, ಶನಿ ಸೌಂದರ್ಯದ ಖನಿ. “ಅರೇ! ಅದಾರು ತೊಡಿಸಿದರೋ ಈ ಬಳೆಗಳನ್ನು”ಎನ್ನುವಂತೆ ನಮ್ಮನ್ನು ಚಕಿತಗೊಳಿಸುತ್ತದೆ. ಈಗ ಶನಿ ಗ್ರಹದ 82 ಚಂದ್ರರನ್ನು ಗುರುತಿಸಿದ್ದಾರೆ.

ಶನಿ ಮತ್ತು ಅದರ ಭವ್ಯ ಬಳೆಗಳು ದೂರದರ್ಶಕದ ಮೂಲಕ. PC: AGAS360

ಇನ್ನು, ಬರಿಗಣ್ಣಿಗೆ ಕಾಣುವ ಧೂಮಕೇತುಗಳು ಹಾಗೂ ಉಲ್ಕಾಪಾತಗಳು ಸದಾ ಅಚ್ಚರಿಯ ಗಣಿಗಳು. ಉಲ್ಕಾಪಾತಗಳು ಆಕಾಶದಲ್ಲಿ ಧೂಮಕೇತುಗಳು ಬಿಟ್ಟುಹೋದ ದೂಳಿನ ಕಣಗಳು. ನಮ್ಮ ಭೂಮಿ ಈ ದೂಳಿನ ಸಮೀಪ ಹಾದು ಹೋಗುವಾಗ ಗುರುತ್ವದಿಂದ ಅವು ಭೂಮಿಗೆ ಬೀಳುತ್ತವೆ. ಬೀಳುವಾಗ ವಾತಾವರಣದೊಂದಿಗೆ ಘರ್ಷಣೆಯಿಂದ ಉರಿದು ಭಸ್ಮವಾಗುತ್ತವೆ. ಉಲ್ಕಾಪಾತ ನಯನಮನೋಹರ. ವರ್ಷಪೂರ್ತಿ ಈ ಬಾಣಬಿರುಸುಗಳ ಪ್ರದರ್ಶನವಿಲ್ಲ; ಎಲ್ಲೋ ಆಗೀಗಷ್ಟೇ ಅವುಗಳ ದರ್ಶನಭಾಗ್ಯ. ಆದರೆ ಧೂಮಕೇತುಗಳು ಹೇಳದೇ ಬರುವ ಅತಿಥಿಗಳು. ಹವ್ಯಾಸಿ ಖಗೋಳ ವೀಕ್ಷಕರೇ ಇವುಗಳನ್ನು ಹೆಚ್ಚಾಗಿ ಗುರುತಿಸಿದುದು. ಸೂರ್ಯನ ಅತ್ಯಂತ ಹೊರ ಕವಚ (ಊರ್ಟ್ ಮೇಘ)ದಿಂದ ದೀರ್ಘವೃತ್ತಾಕಾರದಲ್ಲಿ ಒಳಗೆ ಸೂರ್ಯನ ಕಡೆ ನುಗ್ಗುತ್ತವೆ. ಸೂರ್ಯನಿಗೆ ಸಮೀಪಿಸುತ್ತಿದ್ದಂತೆ ಅವುಗಳ ಬರ್ಫದ ಹೊರಕವಚ ಕರಗಿ ದೂಳಿನ ಬಾಲವೇರ್ಪಡುತ್ತದೆ. ಬಾಲ ಕೆಲವೊಮ್ಮೆ ಲಕ್ಷ ಕಿಮೀ ಉದ್ದವಿರುವುದೂ ಉಂಟು

ಇಷ್ಟೆಲ್ಲ ಹೇಳಿದ ಮೇಲೆ ಇವರನ್ನೆಲ್ಲ ಆಳುವ ನಮ್ಮ ಸೂರ್ಯನ ಕುರಿತು ನಾಲ್ಕು ಮಾತು ಹೇಳದಿದ್ದರೆ ಹೇಗೆ? ಉದಯ-ಅಸ್ತಗಳ ಸಮಯದಲ್ಲಿ ಕೆಂಬಣ್ಣದ ಹೊಂಬಣ್ಣದಲ್ಲಿ ಹೊಳೆವ ಸೂರ್ಯ ನಮ್ಮ ಅನ್ನದಾತ, ಶಕ್ತಿದಾತ. ಎಂಟು ಮುಖ್ಯ ಗ್ರಹಗಳು, ನೂರಾರು ನೈಸರ್ಗಿಕ ಉಪಗ್ರಹಗಳು, ಲಕ್ಷಾಂತರ ಕ್ಷುದ್ರಗ್ರಹಗಳು, ಉಲ್ಕೆಗಳು, ಧೂಮಕೇತುಗಳು – ಎಲ್ಲವನ್ನೂ ತನ್ನ ಗುರುತ್ವದ ಕೈಗಳಿಂದ ಸೆಳೆದು ಹಿಡಿದಿರುವ ಈ ನಮ್ಮ ನಾಯಕ, ಗಾತ್ರದಲ್ಲಿ ಭೂಮಿಗಿಂತ 13 ಲಕ್ಷ ಪಟ್ಟು ದೊಡ್ಡವನು. ದ್ರವ್ಯರಾಶಿಯಲ್ಲಿ ಭೂಮಿಗಿಂತ 3,33,000 ಪಟ್ಟು ಹೆಚ್ಚು. ಹುಟ್ಟಿ 460 ಕೋಟಿ ವರ್ಷ. ಆದರೂ ಕಣ್ಣಿಗೆ ಕಾಣುವ ಅನೇಕ ನಕ್ಷತ್ರಗಳಿಗಿಂತ ದ್ರವ್ಯರಾಶಿಯಲ್ಲಿ ಚಿಕ್ಕವನೇ. ನಮ್ಮ ಸೂರ್ಯ ತನ್ನ ಇಳಿವಯಸ್ಸಿನಲ್ಲಿ ಸೂಪರ್ನೋವಾ ಆಗುವುದಿಲ್ಲ, ಕಪ್ಪುಕುಳಿಯೂ ಆಗುವುದಿಲ್ಲ. ಇನ್ನು 540 ಕೋಟಿ ವರ್ಷಗಳ ಬಳಿಕ ರಕ್ತದೈತ್ಯನಾಗಿ ನಂತರ ಶ್ವೇತಕುಬ್ಜನಾಗಿ ನಂದಿ ಹೋಗುತ್ತಾನೆ. ಆಶ್ಚರ್ಯವಲ್ಲವೇ? -ಅಸ್ತಗಳ ಸಮಯದಲ್ಲಿ ಕೆಂಬಣ್ಣದ ಹೊಂಬಣ್ಣದಲ್ಲಿ ಹೊಳೆವ ಸೂರ್ಯ ನಮ್ಮ ಅನ್ನದಾತ, ಶಕ್ತಿದಾತ

ಈ ಎಲ್ಲ ಖಗೋಳ ಕೌತುಕಗಳು ಹವ್ಯಾಸಿ ವೀಕ್ಷಕನಿಗೆ ಉಚಿತಪ್ರದರ್ಶನದ ರಸದೌತಣವೇ ಸರಿ. ಇವುಗಳೊಂದಿಗೆ ಅಮಿತ ಆಕಾಶದಲ್ಲಿರುವ ನಕ್ಷತ್ರಗಳು, ನಕ್ಷತ್ರ ಪುಂಜಗಳು, ನಕ್ಷತ್ರಗುಚ್ಛಗಳು ಹಾಗೂ ಹಾಲುಚೆಲ್ಲಿದಂತೆ ಆಗಸದುದ್ದಕ್ಕೂ ಹರಡಿರುವ ಕ್ಷೀರಪಥ… ಎಲ್ಲವೂ ಮನಸ್ಸಿಗೆ ಕೊಡುವ ಮುದ, ಆನಂದ, ನೆಮ್ಮದಿ ವರ್ಣನೆಗೆ ನಿಲುಕದ್ದು.

೨೦೨೦ರ NEOWISE (ನಿಯೋವೈಸ್) ಧೂಮಕೇತು . PC: Vibhav Mangalore

ಬೆಟ್ಟದ ತುದಿಹತ್ತಿ ಅಂಗಾತ ಮಲಗಿ ಆಕಾಶ ನೋಡಿದಾಗ ಮನುಷ್ಯನಿಗೆ ಸೃಷ್ಟಿಯ ಅಗಾಧತೆಯ ಬಗ್ಗೆ ವಿಸ್ಮಯವೂ ತನ್ನ ಕುಬ್ಜತೆಯ ವಾಸ್ತವದ ಅರಿವೂ ಏಕಕಾಲಕ್ಕೆ ಆಗಿ “ಜ್ಞಾನೋದಯ” ಆಗುತ್ತದಲ್ಲ; ಅದಕ್ಕೆ ಯಾವುದು ಸಮ!


ಈ ಲೇಖನವು, ಮುಂಚಿತವಾಗಿ ಸೆಪ್ಟೆಂಬರ್ 2021 ರಲ್ಲಿ ಸೂತ್ರ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. (ಓದಿ).

Share:
2


Leave a comment


Your email address will not be published. Required fields are marked *

AP Bhat

Author

Amateur Astronomer
Founder Co-ordinator, PAAC.
Retd. Principal, PPC, Udupi

Recent Posts


New Year, More Events - Astronomy Events 2024
11 months ago
The Partial Lunar Eclipse of 28th Oct 2023 - Images
1 year ago
28th Oct 2023 – Partial Eclipse: All You Need to Know
1 year ago
ಕನ್ನಡದಲ್ಲಿ ಆಕಾಶವನ್ನು ಅನ್ವೇಷಿಸಿ
1 year ago
Astronomy & Philately - Philately Day Special
1 year ago