ಕನ್ನಡದಲ್ಲಿ ಆಕಾಶವನ್ನು ಅನ್ವೇಷಿಸಿ

October 23, 2023

The Night Sky on Stellarium can be switched to various Sky Cultures, including the Indian Vedic culture. However, this is limited. So PAAC presents the Kannada Sky Culture – enabling you to explore the Night Sky in Kannada

ನೀವು ಖಗೋಳಶಾಸ್ತ್ರ ಹಾಗೂ ಕಂಪ್ಯೂಟರ್ ಗಳನ್ನ ಇಷ್ಟಪಡುವವರಾಗಿದ್ದರೆ ನಿಮಗೆ ಬಹುಶಃ ‘ಸ್ಟೆಲ್ಲೆರಿಯಂ’ ಎಂಬ ಒಂದು ಸಾಫ್ಟ್ವೇರ್ ಗೊತ್ತಿರಬಹುದು. ಇದು ಇಡೀ ಆಕಾಶವನ್ನ ಭೂಮಿಯ ದೃಷ್ಟಿಕೋನದಿಂದ ಅನ್ವೇಷಿಸುವ ಕಾರ್ಯ ಮಾಡುತ್ತದೆ.

ಸ್ಟೆಲೇರಿಯಂನಲ್ಲಿ ರಾತ್ರಿ ಆಕಾಶದ ನಕ್ಷತ್ರ ಹಾಗು ನಕ್ಷತ್ರಪುಂಜ ಗಳ ಹೆಸರನ್ನು ವೈದಿಕ ಹೆಸರುಗಳಿಗೆ ಬದಲಾಯಿಸಬಹುದು. ಆದರೆ ಇದು ತುಂಬಾ ಸೀಮಿತವಾಗಿದೆ.

ಪ್ರೊ.ಆರ್.ಎಲ್.ನರಸಿಂಹಯ್ಯ ಇವರು ತಮ್ಮ ಪುಸ್ತಕ ‘ನಕ್ಷತ್ರ ದರ್ಶನ’ ದಲ್ಲಿ ರಾತ್ರಿ ಆಕಾಶವನ್ನು ಗ್ರೀಕ್ ಪುರಾಣಗಳಿಗೆ ಸಮಾನವಾಗುವಂತೆ ಮತ್ತು ನಕ್ಷತ್ರಗಳು, ನಕ್ಷತ್ರಪುಂಜಗಳು ಮತ್ತು ಇತರ ಆಕಾಶ ವಸ್ತುಗಳಿಗೆ ಭಾರತೀಯ ಹೆಸರುಗಳನ್ನು ಬಳಸಿಕೊಂಡು ‘ಹೊಸ’ ರೂಪದಲ್ಲಿ ವಿವರಿಸಿದ್ದಾರೆ.

ಪ್ರಖ್ಯಾತ ಖಗೋಳಶಾಸ್ತ್ರಜ್ಞರಾದ ಡಾ.ಬಿ.ಎಸ್. ಶೈಲಜಾ ಇವರು ಈ ನಾಮಕರಣಗಳನ್ನು ತಮ್ಮ ಪುಸ್ತಕ ‘ಖಗೋಳ ದರ್ಶನ’ದಲ್ಲಿ ಇನ್ನಷ್ಟು ಮಾಹಿತಿಗಳೊಂದಿಗೆ ಪ್ರಕಟಿಸಿದರು.

ನಾವು ಈ ಹೆಸರುಗಳನ್ನ ಉಪಯೋಗಿಸಿ, ಎಲ್ಲಾ ಕನ್ನಡಿಗರು ಹಾಗು ಖಗೋಳ-ಆಸಕ್ತರು ಸ್ಟೆಲ್ಲೇರಿಯಂನಲ್ಲಿ , ಕನ್ನಡದಲ್ಲಿ ರಾತ್ರಿ ಆಕಾಶವನ್ನು ಅನ್ವೇಷಿಸಲು ಅವಕಾಶ ಮಾಡಿಕೊಟ್ಟಿರುತ್ತೇವೆ.

ಡೌನ್‌ಲೋಡ್ ಮಾಡುವುದು ಹೇಗೆ?

ಕನ್ನಡದಲ್ಲಿ ಸ್ಟೆಲೇರಿಯಮ್ ವಿಸ್ತರಣೆಯು ‘ಸ್ಟಾರ್ಲೋರ್’ ರೂಪದಲ್ಲಿದೆ. ಈ ವಿಸ್ತರಣೆಯನ್ನು ಡೌನ್‌ಲೋಡ್ ಮಾಡಲು ಭೇಟಿ ನೀಡಿ ಇಲ್ಲಿ : https://github.com/atulbhats/stellarium-kannada-starlore

ಹೇಗೆ ಅಳವಡಿಸುವುದು?

ಮೇಲಿನ ಲಿಂಕ್ ನಿಂದ ಫೈಲ್ ಅನ್ನು ಡೌನ್ಲೋಡ್ ಮಾಡಿದ ನಂತರ, ಅದನ್ನು ಡಬಲ್-ಕ್ಲಿಕ್ ಮಾಡಿ.

ಕೆಳಗಿನ ಸಂವಾದ ಪೆಟ್ಟಿಗೆಯಲ್ಲಿ, ಸ್ಟೆಲೇರಿಯಮ್‌ನ ಅನುಸ್ಥಾಪನಾ ಮಾರ್ಗವು ಸರಿಯಾಗಿದೆಯೇ ಎಂದು ನೋಡಿ. ಇಲ್ಲದಿದ್ದರೆ, ಮಾರ್ಪಡಿಸಿ, ಮುಂದುವರಿಸಿ.
ಪೂರ್ವನಿಯೋಜಿತ ಸ್ಥಳ : C:\Program Files\Stellarium\

ಪೂರ್ಣಗೊಂಡ ನಂತರ, ಡೈಲಾಗ್ ಬಾಕ್ಸ್ ಮುಚ್ಚುತ್ತದೆ. ಕನ್ನಡದಲ್ಲಿ ಅನ್ವೇಷಿಸಲು ನಿಮ್ಮ ಸ್ಟೆಲ್ಲಾರಿಯಂ ತಯ್ಯಾರಿದೆ.

ಬಳಸುವುದು ಹೇಗೆ?

ಸ್ಟೆಲೇರಿಯಮ್‌ನಲ್ಲಿ, ‘F4’ ಬಟನ್ ಅನ್ನು ಒತ್ತಿರಿ ಅಥವಾ ಎಡ ಫಲಕದಲ್ಲಿರುವ ‘Sky and Viewing Options’ ಯನ್ನು ಆಯ್ಕೆ ಮಾಡಿ.

‘Sky Cultures’ ಗೆ ಹೋಗಿ

ಪಟ್ಟಿಯಿಂದ ‘Kannada’ ವನ್ನು ಆಯ್ಕೆಮಾಡಿ.

ಈಗ ನೀವು ಗಮನಿಸುವಿರಿ. ನಿಮ್ಮ ಸ್ಟೆಲ್ಲೇರಿಯಂ ನಲ್ಲಿರುವ ಆಕಾಶ ಕನ್ನಡದಲ್ಲಿ ತೋರುತ್ತಿದೆ. ಅನ್ವೇಷಿಸಿ.


ಕನ್ನಡದಲ್ಲಿ ಖಗೋಳಶಾಸ್ತ್ರ

ಸೋಷಿಯಲ್ ಮೀಡಿಯಾ ನಲ್ಲಿ ನಮ್ಮ ಹಲವಾರು ಮಾಹಿತಿಗಳು ಕನ್ನಡದಲ್ಲಿವೆ. ಇವುಗಳನ್ನ ನೋದಲ್ಲೂ, #KannadaAstronomy ಎಂಬ ‘ಹ್ಯಾಶ್ಟ್ಯಾಗ್’ ಅನ್ನು ಹುಡುಕಿದರೆ ಸಿಗುತ್ತದೆ.

ಈ ‘ಹ್ಯಾಶ್ ಟ್ಯಾಗ್’ PAAC ಗೆ ಸೀಮಿತವಲ್ಲ. ನೀವು ಬಳಸಬಹುದು.

 

 

 

Share:


Leave a comment


Your email address will not be published. Required fields are marked *

Atul Bhat

Author

Co-ordinator of PAAC, Teaching at the Department of Physics, PPC.
Interested in Anything Science

Recent Posts


New Year, More Events - Astronomy Events 2024
1 year ago
The Partial Lunar Eclipse of 28th Oct 2023 - Images
1 year ago
28th Oct 2023 – Partial Eclipse: All You Need to Know
1 year ago
Astronomy & Philately - Philately Day Special
1 year ago